ನೀ ನುಲಿದ ಒಂದೊಂದು ಮಾತನ್ನು ಹೆಕ್ಕಿ
ಇಟ್ಟಿರುವೆ ಮನವೆಂಬ ಬುಟ್ಟಿಯೊಳಗೆ.
ನಿನ್ನದೇ ದಾರಿ ಕಾದು October 14, 2009
ಹಿತ್ತಲಿಂದ ಹೆಕ್ಕಿ ತಂದ ಕಂಪ ಭೀರೋ ರಂಜದೂವು,
ಈಗ ತಾನೇ ಕಿತ್ತು ತಂದ ಕೆಂಪು ಕೆಂಪು ಕಸಿ ಮಾವು,
ಇಟ್ಟು ಕೊಂಡು ಕೂತಿರುವೆ ನಾನು, ನಿನ್ನದೇ ದಾರಿ ಕಾದು.
ಕಣ್ಣೀರು October 6, 2009
ನಿನ್ನ ವಿರಹದಲ್ಲಿ ನನ್ನ ಕಣ್ಣಿನಿಂದ ಬಿದ್ದ ನೀರು ತುಂಬಿ,
ಊರ ಮುಂದಿನ ಕೆರೆ ಇಂದು ತುಂಬಿ ನಿಂತಿದೆ.
ಹೂ ಹಾಸಿಗೆ October 4, 2009
ನಿನ್ನ ನೆನಪಿನ ಹೂ ಹಾಸಿಗೆ ಮೇಲೆ ಹಾಯಾಗಿ ಮಲಗಿರುವೆ,
ಓಹ್.., ಒಮ್ಮೊಮ್ಮೆ ವಿರಹದ ಮುಳ್ಳು ರಕ್ತ ಬರುವಂತೆ ಚುಚ್ಚಿಬಿಡುತ್ತವೆ.
ಯಾಕೆ? September 19, 2009
ಮನವೆಂಬ ಆಗಸದಲ್ಲಿ ನೆನಪಿನ ಚುಕ್ಕೆಗಳಿಟ್ಟು,
ಚಿತ್ತಾರವ ಅರ್ಧಕೆ ನಿಲಿಸಿ ನೀನ್ಯಾಕೆ ಮರೆಯಾದೆ?