ನಿನ್ನ ನೆನಪಿನಲ್ಲಿ

ಬುಟ್ಟಿ August 28, 2010

Filed under: ನೆನಪು — Karthik S Udupa @ 12:32 pm

ನೀ ನುಲಿದ ಒಂದೊಂದು ಮಾತನ್ನು ಹೆಕ್ಕಿ
ಇಟ್ಟಿರುವೆ ಮನವೆಂಬ ಬುಟ್ಟಿಯೊಳಗೆ.

Advertisements
 

ಸ್ಮಶಾಣ October 21, 2009

Filed under: ನೆನಪು — Karthik S Udupa @ 4:20 am

ನಿನ್ನ ನೆನಪಲ್ಲಿ ಹುಟ್ಟಿ ಸತ್ತ ಕನಸುಗಳ ಹೂಳಲು
ನನ್ನೆದೆಯಲ್ಲಿನ್ನು ಜಾಗವೇ ಉಳಿದಿಲ್ಲ.

 

ನಿನ್ನದೇ ದಾರಿ ಕಾದು October 14, 2009

Filed under: ಕರೆಯೋಲೆ — Karthik S Udupa @ 4:46 am

ಹಿತ್ತಲಿಂದ ಹೆಕ್ಕಿ ತಂದ ಕಂಪ ಭೀರೋ ರಂಜದೂವು,
ಈಗ ತಾನೇ ಕಿತ್ತು ತಂದ ಕೆಂಪು ಕೆಂಪು ಕಸಿ ಮಾವು,
ಇಟ್ಟು ಕೊಂಡು ಕೂತಿರುವೆ ನಾನು, ನಿನ್ನದೇ ದಾರಿ ಕಾದು.

 

ಕಣ್ಣೀರು October 6, 2009

Filed under: ನೆನಪು — Karthik S Udupa @ 6:24 pm

ನಿನ್ನ ವಿರಹದಲ್ಲಿ ನನ್ನ ಕಣ್ಣಿನಿಂದ ಬಿದ್ದ ನೀರು ತುಂಬಿ,
ಊರ ಮುಂದಿನ ಕೆರೆ ಇಂದು ತುಂಬಿ ನಿಂತಿದೆ.

 

ಹೂ ಹಾಸಿಗೆ October 4, 2009

Filed under: ನೆನಪು — Karthik S Udupa @ 2:12 pm

ನಿನ್ನ ನೆನಪಿನ ಹೂ ಹಾಸಿಗೆ ಮೇಲೆ ಹಾಯಾಗಿ ಮಲಗಿರುವೆ,
ಓಹ್.., ಒಮ್ಮೊಮ್ಮೆ ವಿರಹದ ಮುಳ್ಳು ರಕ್ತ ಬರುವಂತೆ ಚುಚ್ಚಿಬಿಡುತ್ತವೆ.

 

ಹೆಜ್ಜೆ ಗುರುತು

Filed under: ನೆನಪು — Karthik S Udupa @ 6:08 am

ಅಂದು ನೀನು ನನ್ನ ಮನದಿ ಬಿಟ್ಟು ಹೋದ ಹೆಜ್ಜೆ ಗುರುತು,
ಇಂದು ಕೂಡ ನಿನ್ನ ಬರುವ ಕಾದು ಕುಳಿತಿವೆ.

 

ಯಾಕೆ? September 19, 2009

Filed under: ಕೋರಿಕೆ — Karthik S Udupa @ 7:19 am
Tags: , ,

ಮನವೆಂಬ ಆಗಸದಲ್ಲಿ ನೆನಪಿನ ಚುಕ್ಕೆಗಳಿಟ್ಟು,
ಚಿತ್ತಾರವ ಅರ್ಧಕೆ ನಿಲಿಸಿ ನೀನ್ಯಾಕೆ ಮರೆಯಾದೆ?